Share0 Bookmarks 47 Reads0 Likes
ಕಳೆದ ಹದಿನಾರು ವರ್ಷಗಳಿಂದ ಅನಿವಾರ್ಯವಾಗಿ ಪ್ರಾಮಾಣಿಕ ಪತ್ನಿ ಆಗಿದ್ದ ನನಗೆ ಗೊತ್ತಿಲ್ಲದಂತೆ ಪರ ಪುರುಷನ ಮೇಲೆ ಅತಿಯಾಗದ ಪ್ರೀತಿ ಮತ್ತು ಮೋಹ. ಡೇವಿಡ್ ಮೊದಲು ಇದೇ ಬ್ಯಾಂಕ್ ನ ಇನ್ನೊಂದು ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ. ಅವನು ಈ ಶಾಖೆಗೆ ವರ್ಗವಾಗಿ ಬಂದ ಮೊದಲ ದಿನವೇ ನನಗೆ ಅವನ ಮೇಲೆ ಆಸೆ ಆಯಿತು. ಅವನ ದುಂಡಾದ ಮುಖ ನೇರವಾದ ಮೂಗು ಸುಂದರವಾದ ಮೈಕಟ್ಟು ಮತ್ತು ಅವನ ಆ ಮಿನುಗುವ ಕಣ್ಣುಗಳು ನನ್ನಲ್ಲಿ ಹೊಸ ಆಸೆಗಳಿಗೆ ಜನ್ಮ ನೀಡಿದವು. ಪ್ರತಿ ದಿನವೂ ಅವನಿಗೆ ಜನ್ಮದಿನ ವಿದ್ದಂತೆ ಹೊಸ ಹೊಸ ಬಟ್ಟೆಗಳನ್ನು ಧರಿಸುತ್ತಿದ್ದನು, ಪ್ರತಿಕ್ಷಣವೂ ಅವನ ಮುಖದ ಮೇಲೆ ಮುಗುಳ್ನಗೆ ಇರುತ್ತಿತ್ತು.
ಎಲ್ಲ ಹೆಣ್ಣು ಮಕ್ಕಳಂತೆ ನನಗೂ ಸಾಕಷ್ಟು ಬಯಕೆಗಳಿದ್ದವು. ಸಾಧಿಸುವ ಛಲದೊಂದಿಗೆ ನೂರಾರು ಕನಸುಗಳು ಇದ್ದವು. ಆದರೆ ಕಲಿಯುವ ವಯಸ್ಸಿನಲ್ಲಿ ನನಗಿಂತ ಹತ್ತು ವರ್ಷ ವಯಸ್ಸಿನಲ್ಲಿ ಹಿರಿಯನಾದ ಪುರುಷನನ್ನು ಮದುವೆಯಾಗಿ, ಅತ್ತೆ - ಮಾವನ ಅಪೇಕ್ಷೆಯಂತೆ ವರ್ಷ ತುಂಬುವುದರಲ್ಲಿ ಗಂಡುಮಗುವಿಗೆ ತಾಯಿಯಾಗಿ, ಇನ್ನೇನು ನನ್ನ ಜೀವನ ಇಷ್ಟೇ ಅಂದುಕೊಂಡಿದ್ದೆ. ಹೆಂಡತಿ ಮಕ್ಕಳನ್ನು ಸಂತೋಷವಾಗಿ ಇಡಬೇಕು ಅವರ ಕನಸುಗಳನ್ನು ನನಸು ಮಾಡಬೇಕು ಎಂದು ತಿಳಿದಿದ್ದ ನನ್ನ ಗಂಡ, ನಾನು ಹೇಳಿದೊಡನೆ ನನ್ನಾಸೆಯಂತೆ ಹೊರಗೆ ಹೋಗಿ ದುಡಿಯಲು ಮತ್ತು ಆರ್ಥಿಕವಾಗಿ ಸ್ವಾವಲಂಬಿಯಾಗಲು ಅವಕಾಶ ಮಾಡಿಕೊಟ್ಟರು. ಹಲವಾರು ತಲೆಮಾರುಗಳಿಂದ ನಾವು ತವರುಮನೆಯಲ್ಲಾಗಲಿ ಅಥವಾ ಗಂಡನ ಮನೆಯಲ್ಲಾಗಲಿ ಒಂದು ಮಟ್ಟಕ್ಕೆ ಶ್ರೀಮಂತರೇ. ನಮ್ಮ ಮನೆತನಕ್ಕೆ ಊರಲ್ಲಿ ತುಂಬಾ ಗೌರವ. ನಮಗೆ ಯಾವುದೇ ರೀತಿಯ ಆರ್ಥಿಕ ತೊಂದರೆಗಳಿರಲಿಲ್ಲ. ಮದುವೆಯಾದ ತಕ್ಷಣ ನನ್ನವರು ನನ್ನ ಕೆಲಸಕ್ಕೆ ಅನುಕೂಲವಾಗಲು ಪಟ್ಟಣದಲ್ಲೇ ಮನೆ ಮಾಡಿದರು. ಮಗುವಿಗೆ ವರ್ಷ ತುಂಬಿದ ಮೇಲೆ ನನ್ನ ತಾಯಿಯ ಬಳಿ ಬಿಟ್ಟು ಬಂದೆ. ನಂತರದ ದಿನಗಳಲ್ಲಿ ವಾರದ ಐದು ದಿನ ನನ್ನವರು ಸಂಪೂರ್ಣವಾಗಿ ಪಕ್ಕದ ರಾಜ್ಯದಲ್ಲಿಯೇ ಉಳಿಯುತ್ತಿದ್ದರು, ತಮ್ಮ ಟಾರ್ಗೆಟನ್ನು ಮುಗಿಸಿ, ಎರಡು ದಿನ ಅತಿಥಿಯಂತೆ ನನ್ನೊಟ್ಟಿಗೆ ಕಳೆದು, ಮತ್ತೆ ನಾನು ಅವರಿಗಾಗಿ ಐದು ದಿನಗಳ ಕಾಲ ಕಾಯುವ ಒಂಟಿತನದ ಜೀವನ ನನ್ನದು.
ಕಾಲಕಳೆದಂತೆ ಡೇವಿಡ್ ನ ಜೊತೆ ಒಡನಾಟ ಆರಂಭವಾಯಿತು ಒಂದು ದಿನ ಡೇವಿಡ್ "ನನಗೆ ಚಿಕ್ಕವನಿದ್ದಾಗಿನಿಂದ ದುಡ್ಡು ಎಣಿಸುವುದೆಂದರೆ ತುಂಬಾ ಇಷ್ಟ" ಎಂದು ಹೇಳಿದ. "ಬಹುಶಃ ಅದಕ್ಕೆ ನೀವು ಕ್ಯಾಶಿಯರ್ ಆಗಿದ್ದೀರಾ" ಎಂದೆ. ಕ್ಯಾಶಿಯರ್ ಕೌಂಟರ್ ಪಕ್ಕದಲ್ಲಿ ನನ್ನ ಕುರ್ಚಿ ಇತ್ತು ಡೇವಿಡ್ ನನ್ನ ಕೈಗೆ ತನ್ನ ಕೈ ತಾಕಿದಾಗಲೆಲ್ಲ ವಿನಮ್ರವಾಗಿ ಕ್ಷಮೆ ಕೇಳುತ್ತಿದ್ದ. ಅವನಿಗೇನು ಗೊತ್ತು ಆ ಸ್ಪರ್ಶದಿಂದ ನನ್ನ ಮೈ ಎಲ್ಲ ರೋಮಾಂಚನವಾಗುತ್ತಿತ್ತು. ಆರಂಭದಲ್ಲಿ ಅದನ್ನೇ ನೆನೆದು ನೆನೆದು ನನ್ನ ಒಂಟಿತನವನ್ನು ಮರೆತು ನನ್ನ ಐದು ರಾತ್ರಿಗಳನ್ನು ಕಳೆಯುತ್ತಿದ್ದೆ. ಇನ್ನೆರಡು ದಿನ ಏಕೋ ಗೊತ್ತಿಲ್ಲ ಗಂಡ ಜೊತೆ ಇರುವಾಗ ಅವನ ನೆನಪೇ ಬರುತ್ತಿರಲಿಲ್ಲ. ಆತ ಕ್ರಿಶ್ಚಿಯನ್ ಆಗಿದ್ದರೂ ಕೂಡ ಎಲ್ಲಾ ಧರ್ಮದ ಹಬ್ಬಗಳಿಗೆ ಆಚರಣೆಗಳಿಗೆ ಎಲ್ಲರಿಗೂ ಸಂತೋಷದಿಂದ ಕೈಕುಲುಕಿ ಶುಭಾಶಯವನ್ನು ತಿಳಿಸುತ್ತಿದ್ದ. ನಾನು ಬೇಕಂತಲೇ ಅವನ ಕೈಯನ್ನು ಬೇಗ ಬಿಡುತ್ತಿರಲಿಲ್ಲ ಆದರೂ ಕೂಡ ಅವನಿಗೆ ನನ್ನ ಉದ್ದೇಶ ಅರ್ಥವಾಗುತ್ತಿರಲಿಲ್ಲ. ನಮ್ಮ ಬ್ಯಾಂಕ್ ಸೇರಿದ ಆರೇ ತಿಂಗಳಲ್ಲಿ ಅವನಿಗೆ ಮದುವೆ ನಿಶ್ಚಯವಾಯಿತು. ಬ್ಯಾಂಕಿನ ಎಲ್ಲಾ ಸಹಕರ್ಮಿಗಳಿಗೆ ವಿಷಯ ತಿಳಿಸಿ ಸಿಹಿ ಹಂಚುತ್ತಿದ್ದುದ್ದನ್ನು ನೋಡಿ ನನಗೆ ಎಲ್ಲಿಲ್ಲದ ದುಃಖ ಉಕ್ಕಿಬರಲಾರಂಭಿಸಿತು. ಯಾರೊಂದಿಗೂ ಏನನ್ನು ಮಾತನಾಡದೆ, ಕೆಲಸ ಮುಗಿದ ತಕ್ಷಣ ಮನೆಗೆ ಹೋಗಿ, ನನ್ನ ಕೋಣೆ ಸೇರಿಕೊಂಡೆ. ಅಲ್ಲಿಯವರೆಗೂ ತಡೆದಿದ್ದ ನನ್ನ ದುಃಖದ ಆಣೆಕಟ್ಟು ಒಡೆದು ಹೋಯಿತು. ನನ್ನ ಹಾಸಿಗೆಯ ಮೇಲೆ ಬಿದ್ದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದೆ. ನಂತರ ನನ್ನಷ್ಟಕ್ಕೆ ನಾನು ಸಮಾಧಾನ ಮಾಡಿಕೊಂಡು ಬಟ್ಟೆ ಬದಲಿಸಿ ಅಡುಗೆ ಮನೆ ಸೇರಿದೆ. ಕಾರಣಾಂತರಗಳಿಂದ ನನ್ನ ಗಂಡ ಒಂದು ದಿನ ಮುಂಚೆ ಅನ್ನುವಂತೆ ಅದೇ ಸಂಜೆ ಬಂದರು. ಬಟ್ಟೆ ಬದಲಿಸಿ ಕೆಲಸದ ದನಿವು ತನಿಸಲು ಹಾಸಿಗೆಯ ಮೇಲೆ ಹೊರಳಾಡುವಾಗ ನನ್ನ ಕಣ್ಣೀರಿನಿಂದ ಒದ್ದೆಯಾದ ತಲೆದಿಂಬನ್ನು ಸ್ಪರ್ಶಿಸಿದರು. ನನ್ನನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡವರಂತೆ "ಸರೋಜಾ ಏನಾಯ್ತು? ಯಾರಾದರೂ ಏನಾದರೂ ಹೇಳಿದರಾ? ಇವತ್ತು ಯಾಕೆ ಇಷ್ಟು ದುಃಖದಲ್ಲಿದ್ದೀಯಾ? ಎಂದು ಕೇಳಿದರು ನಿಜ ಹೇಳುವ ಧೈರ್ಯವಿಲ್ಲದೆ "ರೀ ನಿಮ್ಮ ನೆನಪು ಕಾಡುತ್ತಿತ್ತು ರೀ" ಎಂದು ಹೇಳಿದೆ ಅದೇ ನಿಜವೆಂದು ತಿಳಿದು ಖುಷಿಯಲ್ಲಿ ನನ್ನ ಗಂಡ ನನ್ನನ್ನು ಅಪ್ಪಿಕೊಂಡು ಮುದ್ದಾಡತೊಡಗಿದರು ಇಬ್ಬರು ಮಂಚವನ್ನು ಏರಿದೆವು. ಆಗ ನನಗೆ ಡೇವಿಡ್ ನ ನೆನಪು ಕಾಡಲಾರಂಭಿಸಿತು.
ಮಾರನೆದಿನ ನಾನು ಮತ್ತು ಡೇವಿಡ್ ಬ್ಯಾಂಕಿಗೆ ಪ್ರತಿದಿನಕ್ಕಿಂತ ಒಂದು ಗಂಟೆ ಮುಂಚಿತವಾಗಿ ಬಂದಿದ್ದೇವೆ. ಗ್ರಾಹಕರೂ ಇಲ್ಲ ಸಹಕರ್ಮಿಗಳೂ ಇಲ್ಲ. ಇದೇ ಸರಿಯಾದ ಸಮಯವೆಂದು ತಿಳಿದು ನಾನು ಕ್ಯಾಶಿಯರ್ ಕೌಂಟರ್ ಒಳಗೆ ಸೇರಿದ ತಕ್ಷಣ ಗಾಬರಿಯಿಂದ ಡೇವಿಡ್ ಎದ್ದುನಿಂತನು. ನಾನು ನನ್ನ ಎರಡು ಕೈಗಳಿಂದ ಅವನ ಅಂಗಿಯನ್ನು ಹಿಡಿದು ನನ್ನ ಕಡೆಗೆ ಎಳೆದು ಅವನ ಹಣೆಗೆ ಮುತ್ತಿಟ್ಟೆ. ಅವನಿಗೂ ಅವನ ಮನಸ್ಸಿನ ಮೇಲಿನ ನಿಯಂತ್ರಣ ತಪ್ಪಿ ಹೋಯಿತು ಒಂದು ಕೈಯನ್ನು ಸೊಂಟದ ಮೇಲಿಟ್ಟು ನನ್ನನ್ನು ಅವನೆಡೆಗೆ ಒತ್ತಿಕೊಂಡು ಇನ್ನೋಂದು ಕೈಯಿಂದ ನನ್ನ ಕೂದಲನ್ನು ಎಳೆದು ಇನ್ನೇನು ಪರಸ್ಪರ ತುಟಿಗಳು ಒಂದಾಗ ಬೇಕೆನ್ನುವಷ್ಟರಲ್ಲಿ ಮುಂಜಾನೆ ಆರು ಗಂಟೆಯ ಅಲಾರಾಂ ಘಂಟೆಯ ಸದ್ದು ಕನಸ್ಸಲ್ಲಿ ಸಿಗುತ್ತಿದ್ದ ಒಂದಿಷ್ಟು ಪ್ರೀತಿಯನ್ನು ಸಿಗದಂತೆ ಮಾಡಿತು.
ನೆನಪಿಗೆ ಬಾರದ ಸ್ವಪ್ನದಂತೆ ಮೂರೇ ಮೂರು ದಿನದಲ್ಲಿ ಡೇವಿಡ್ ಗೆ ಮದುವೆ ನಿಶ್ಚಯವಾಗಿರುವುದನ್ನು ಮರೆತು, ಮೊದಲಿನಂತೆ ಬ್ಯಾಂಕಿನಲ್ಲಿ ಕೆಲಸ ಮಾಡತೊಡಗಿದೆ ದಿನಪೂರ್ತಿ ಕಣ್ಣು ಮನಸ್ಸು ತುಂಬಿ ನೋಡುವ ಆಸೆ. ಕಂಡ ಅರ್ಧ ಕನಸ್ಸನ್ನು ವಾಸ್ತವದಲ್ಲಿ ನನಸಾಗಿಸುವ ತವಕ. ಆದರೆ ಸುತ್ತಮುತ್ತಲಿರುವ ಜನ ಹಾಗೂ ಸಿಸಿಟಿವಿ ಕ್ಯಾಮೆರಾಗಳಿಗೆ ಹೆದರುತ್ತಿದ್ದೆ. ಮಧ್ಯಾಹ್ನ ಊಟ ಮಾಡುವಾಗ ಮಾತ್ರ ಹತ್ತು ಹದಿನೈದು ನಿಮಿಷ ಕಣ್ಣು ಮಿಟುಕಿಸದೆ ನೋಡಲು ಅವಕಾಶ ಸಿಗುತ್ತಿತ್ತು. ನನ್ನ ತುಂಬಿದ ಮೈ ಕೈಯಿಂದ ಅವನನ್ನು ಆಕರ್ಷಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೆ. ಗ್ರಾಹಕರಿಂದ ಹಿಡಿದು ಬ್ಯಾಂಕಿನ ಸಹಕರ್ಮಿಯರೆಲ್ಲರೂ ನನಗೆ ಅರಿವಾಗುವಂತೆ ನನ್ನ ಸೊಂಟ ಮತ್ತು ಎದೆಯ ಮೇಲೊಂದು ಕೆಟ್ಟ ದೃಷ್ಟಿ ಹಾಯಿಸುತ್ತಿದ್ದರು. ಆದರೆ ಡೇವಿಡ್ ಗೆ ಬರೀ ಕೆಲಸದ ಮೇಲೆ ಗಮನವಿರುತ್ತಿತ್ತು ಬಹುಶ: ನಾನು ಅವನಿಗಿಂತ ಐದಾರು ವರ್ಷ ದೊಡ್ಡವಳು, ಮದುವೆಯಾದವಳು ಎನ್ನುವ ಉದ್ದೇಶದಿಂದ ಹಾಗೆ ಮಾಡುತ್ತಿರಬಹುದು ಎಂದುಕೊಂಡಿದ್ದೆ.
ದಿನ ಕಳೆದಂತೆ ಅವನ ಮೇಲೆ ಆಸೆ ಹೆಚ್ಚಾಗ ತೊಡಗಿತು. ಅದನ್ನು ವ್ಯಕ್ತಪಡಿಸಲು ಅತಿಯಾದ ಹೆದರಿಕೆ ಮತ್ತು ನಾಚಿಕೆ. ಇನ್ನೇನು ದೃಢ ನಿರ್ಧಾರಮಾಡಿ ಹೇಳೀಯೇ ಬಿಡಬೇಕೆನ್ನುವಷ್ಟರಲ್ಲಿ ಅವನ ಮದುವೆಯ ದಿನ ಕೂಡ ಗೊತ್ತಾಗಿತ್ತು. ಅವನು ಎಲ್ಲರ ಜೊತೆ ನನಗೂ ಆಮಂತ್ರಣ ಪತ್ರಿಕೆ ಕೊಟ್ಟು "ಸಹಕುಟುಂಬ ಸಹ ಪರಿವಾರದೊಡನೆ ಬನ್ನಿ" ಎಂದು ಹೇಳಿದಾಗ, ಅವನ ಮುಂದೆ ಆ ಪತ್ರಿಕೆಯನ್ನು ಹರಿದು ನನ್ನ ದುಃಖವನ್ನು ಹೇಳಬೇಕೆನಿಸಿತು ಆದರೆ ಸಮಾಜಕ್ಕೆ ಹೆದರಿ ನನ್ನನ್ನು ನಾನು ನಿಯಂತ್ರಿಸಿಕೊಂಡೆ. ಮನೆ ತಲುಪಿದ ಮೇಲೆ ನಾನು ಡೇವಿಡ್ ನನ್ನು ಕಳೆದುಕೊಳ್ಳುತ್ತೇನೆ ಎಂದು ನೊಂದು ಅಳತೊಡಗಿದೆ. ಅವನಿಗೆ ಮದುವೆ ಆದರೆ ನಾನೇಕೆ ಅಳಬೇಕು, ನನಗೂ ಮದುವೆಯಾಗಿದೆಯಲ್ಲ? ನನಗೆ ಅವನ ಮೇಲಿರುವುದು ಬರೀ ಆಕರ್ಷಣೆ ಅಷ್ಟೇ. ಗಂಡ ಮತ್ತು ಮಗುವನ್ನು ಬಿಟ್ಟು ಅವನನ್ನು ಮದುವೆಯಾಗಿ ಸಮಾಜ ಮತ್ತು ಮನೆಯವರಿಂದ ಛೀಮಾರಿ ಹಾಕಿಸಿಕೊಳ್ಳುವುದು ಬೇಡ. ಹೇಗಾದರು ಮಾಡಿ ಡೇವಿಡ್ ನ ಪ್ರೀತಿಯನ್ನು ಪಡೆದುಕೊಂಡರಾಯಿತು ಎಂದು ಸಮಾಧಾನ ಮಾಡಿಕೊಂಡೆ. ಮದುವೆ ಆದ ಮೇಲೂ ನನ್ನೊಟ್ಟಿಗೆ ಕೆಲಸ ಮಾಡುತ್ತಿರುತ್ತಾನೆ, ಅವನನ್ನು ನೋಡುತ್ತಾ ಕೈ ಸ್ಪರ್ಶವನ್ನಾದರೂ ಪಡೆಯುತ್ತಾ, ಇದ್ದುಬಿಡುತ್ತೇನೆ ಅಂದುಕೊಂಡಿದ್ದೆ. ಅವನು ಮದುವೆಗಾಗಿ ಒಂದು ತಿಂಗಳು ರಜೆ ತೆಗೆದುಕೊಂಡು ಹೋಗಿದ್ದ. ಕೇವಲ ಇರುಳಲ್ಲಿ ಒಂಟಿತನ ಅನುಭವಿಸಿದ ನನಗೆ ಅವನ ಅನುಪಸ್ಥಿತಿ ಇನ್ನಷ್ಟು ಕಾಡಲಾರಂಭಿಸಿತು. ನಾನು ಸಾಧ್ಯವಿದ್ದರೂ ಅವನ ಮದುವೆಗೆ ಹೋಗಲಿಲ್ಲ, ಅವನಿಗೆ ಶುಭ ಕೋರಲಿಲ್ಲ. ರಜೆ ಮುಗಿದು ಬ್ಯಾಂಕಿಗೆ ಬಂದ ಮೇಲೆ ನಾನೇಕೆ ಮದುವೆಗೆ ಬರಲಿಲ್ಲವೆಂದು ಕೋಪ ಮಾಡಿಕೊಂಡು, ನನ್ನೊಂದಿಗೆ ಜಗಳ ಮಾಡುತ್ತಾನೆ ಎಂದುಕೊಂಡಿದ್ದೆ. ಆದರೆ ಆ ರೀತಿ ಏನೂ ನಡೆಯಲಿಲ್ಲ. "ನೀವೂ ಮದುವೆಗೆ ಬರಬೇಕಿತ್ತು, ನನ್ನ ಸಂಗಾತಿ ಮತ್ತು ನನ್ನ ಅವಿಭಕ್ತ ಕುಟುಂಬವನ್ನು ಪರಿಚಯ ಮಾಡಿಸಿ ಕೊಡುತ್ತಿದ್ದೆ" ಎಂದು ಹೇಳಿ ಉತ್ತರವನ್ನು ಅಪೇಕ್ಷಿಸದೆ ಅವನಷ್ಟಕ್ಕೆ ಅವನು ಕೆಲಸದಲ್ಲಿ ನಿರತನಾದನು. ದಿನವಿಡಿ ಸಹಕರ್ಮಿಗಳೆಲ್ಲರೂ ಹೊಸ ಜೀವನ ಅದು ಇದು ಎಂದು ಅವನನ್ನು ರೇಗಿಸುತ್ತ ಹಾಸ್ಯ ತಮಾಷೇ ಮಾಡಿದರು. ನನಗೆ ಅದನ್ನು ಸಹಿಸಲು ಆಗಲಿಲ್ಲ. ಸಂಜೆ ಕೆಲಸ ಮುಗಿಸಿ ಹೋಗುವಾಗ ಕಣ್ಣು ಚಿವುಟಿ "ಈಗ ತಾನೆ ಮದುವೆ ಆಗಿದ್ದೀರಾ ಎಂಜಾಯ್ ಮಾಡಿ" ಎಂದೇ. ಅದನ್ನು ಕೇಳಿ ಡೇವಿಡ್ ನ ಗಲ್ಲಗಳು ಕೆಂಪಾದವು ಅವನು ಒಳ ಒಳಗೆ ನಗುತ್ತಾ ನಾಚಿ ಅಲ್ಲಿಂದ ಹೊರಟು ಹೋದನು. ಆಗ ಆ ಕೆಂಪುಗಲ್ಲಗಳ ಮೇಲೆ ಒಮ್ಮೆಯಾದರೂ ಮುತ್ತಿಡಲೇಬೇಕೆಂದು ನಿರ್ಧರಿಸಿದೆ.
ಪ್ರತಿಸಲದಂತೆ ದುರಾದೃಷ್ಟವೇ ಇರಬೇಕು ಬಯಕೆಗಳು ಫಲ ಕೊಡುವ ಮುನ್ನ ನನ್ನ ಆಸೆಗಳ ಗೂಡಿಗೆ ಬೆಂಕಿ ಬಿದ್ದಂತಾಯಿತು. "ಸಂಗಾತಿಯ ಕಾಲ್ಗುಣದಿಂದ ಡೇವಿಡ್ ಗೆ ಅದೃಷ್ಟ ಶುರುವಾಗಿದೆ, ಆಡಳಿತ ಮಂಡಳಿಯಲ್ಲಿ ನಿರ್ದೇಶಕ ಸ್ಥಾನ ಸಿಕ್ಕಿದೆ" ಎಂದು ನಮ್ಮ ಬ್ಯಾಂಕಿನ ಸಿಪಾಯಿ ಹೇಳುತ್ತಿರುವುದು ನನ್ನ ಕಿವಿಗೆ ಬಿತ್ತು. ತಿಂಗಳು ಮುಗಿಯಲು ಇನ್ನು ಹತ್ತು ದಿನ ಇದ್ದುದ್ದರಿಂದ, ಅವನು ತಿಂಗಳು ಮುಗಿಸಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ, ನಿರ್ದೇಶಕ ಸ್ಥಾನವನ್ನು ಸ್ವೀಕರಿಸಬೇಕೆಂದು ನಿರ್ಧರಿಸಿದ್ದ. ಉಳಿದಿರುವ ಹತ್ತು ದಿನ ಪಕ್ಕದಲ್ಲೆ ಕುಳಿತು ಅವನನ್ನು ಕದ್ದು ಕದ್ದು ನೋಡಿ ನರಳುವುದಕ್ಕಿಂತ ನನ್ನ ಮನಸ್ಸಿನಲ್ಲಿರುವುದನ್ನೆಲ್ಲವನ್ನು ನಿಸಂಕೋಚವಾಗಿ ಹೇಳಬೇಕೆಂದು ನಿರ್ಧರಿಸಿದೆ. ಅವನೊಂದಿಗೆ ಮಾತನಾಡಿಸಲು ಸಿಕ್ಕ ಸಮಯವನ್ನು ಸರಿಯಾಗಿ ಬಳಸಿಕೊಂಡೆ. ಮುಂಬಡ್ತಿಗಾಗಿ ಶುಭಾಶಯ ತಿಳಿಸಿ, ಕಾಫಿ ಕುಡಿಯಲು ಮನೆಗೆ ಆಹ್ವಾನ ನೀಡಿದೆ. ಮೊದಲಿಗೆ ನಿರಾಕರಿಸಿ ನನ್ನ ಬಲವಂತಕ್ಕೆ ಒಪ್ಪಿಕೊಂಡು ನನ್ನೊಂದಿಗೆ ಕಾಫಿ ಕುಡಿಯಲು ನಮ್ಮ ಮನೆಗೆ ಬಂದನು. ನೀರು ಕೊಟ್ಟು ನಂತರ ಕಾಫಿ ಕೊಟ್ಟೆ. ಅವನು ಕಾಫಿ ಕುಡಿಯಲು ಆರಂಭಿಸುವಾಗ ಗೋಡೆಗೆ ಹಾಕಿದ್ದ ನನ್ನ ಮತ್ತು ನನ್ನ ಗಂಡನ ಭಾವಚಿತ್ರ ಅವನ ಕಣ್ಣಿಗೆಬಿತ್ತು. "ನಿಮ್ಮ ಜೋಡಿ ಮೇಡ್ ಫಾರ್ ಈಚ್ ಅದರ್" ಎಂದು ಹೇಳಿ ಹದಿನಾರು ವರ್ಪದ ಹಿಂದೆ ನನ್ನ ಮನಸ್ಸಿನ ಮೇಲೆ ಆಗಿದ್ದ ಗಾಯದ ಮೇಲೆ ಬರೆ ಎಳೆದನು. ಅವನ ಹೊಗಳಿಕೆ ನನಗೆ ಅಪಹಾಸ್ಯವೆನಿಸಿತು. ಅವನು ಇನ್ನೇನಾದರು ಹೇಳಿ ನನ್ನ ನಿರ್ಧಾರವನ್ನು ಬದಲಿಸುವ ಮುನ್ನ ನಾನು ಸಾಕಷ್ಟು ಧೈರ್ಯ ಮಾಡಿ ಅವನಿಗೆ ಅವನು ಬ್ಯಾಂಕ್ ಸೇರಿದ ದಿನದಿಂದ ಹಿಡಿದು ಇಂದು ನಮ್ಮ ಮನೆಗೆ ಬಂದ ದಿನದವರೆಗೆ ನನ್ನೊಂದಿಗೆ ಆದ ಎಲ್ಲ ಘಟನೆಗಳನ್ನು ಮತ್ತು ನನ್ನೆಲ್ಲ ಬಯಕೆಗಳನ್ನು ತಿಳಿಸಿದೆ ಅವನ ಮುಖದ ಮೇಲೆ ಆಶ್ಚರ್ಯ ಮತ್ತು ಒಂದು ರೀತಿಯ ಭಯವನ್ನು ನೋಡಿದೆ. "ನನ್ನದು ಪ್ರೇಮ ವಿವಾಹ, ನನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತೇನೆ. ಅವಳಿಗೆ ನಾನು ಪ್ರಾಮಾಣಿಕನಾಗಿರಬೇಕು ಮತ್ತು ಅವಳಿಗೆ ದ್ರೋಹ ಮಾಡಬಾರದು ಎಂದು ಪ್ರಮಾಣ ಮತ್ತು ನಿರ್ಧಾರ ಮಾಡಿದ್ದೇನೆ" ಎಂದು ಹೇಳಿದನು. "ನಾನು ನನ್ನ ಗಂಡನನ್ನು ಬಿಟ್ಟು ನಿನ್ನೊಂದಿಗೆ ಬರುವುದಿಲ್ಲ. ನನಗೆ ಕೇವಲ ನೀನು, ನಿನ್ನ ಸ್ನೇಹ ಮತ್ತು ಪ್ರೀತಿ ಬೇಕು" ಎಂದಾಗ, "ನಾವು ಇಪ್ಪತ್ತೋಂದನೇ ಶತಮಾನದಲ್ಲಿ ಇದ್ದೇವೆ ನಮ್ಮ ಬಳಿ ಮೊಬೈಲ್ ಇದೆ, ಇಂಟರ್ನೆಟ್ ಇದೆ, ನಾವು ಪರಸ್ಪರ ಸಂಪರ್ಕದಲ್ಲಿರಬಹುದು ಕಷ್ಟ ಸುಖವನ್ನು ವಿನಿಮಯ ಮಾಡಿಕೊಳ್ಳುತ್ತಿರಬಹುದು" ಎಂದು ಹೇಳಿದ. ಆದರೆ ದಿನವೂ ಕ್ರೈಂ ಸುದ್ದಿ ಓದುವ ಮತ್ತು ನೋಡುವ ನನಗೆ ಮೊಬೈಲ್ ಮತ್ತು ಇಂಟರ್ನೆಟ್ ನಲ್ಲಿ ನಮ್ಮ ಸ್ನೇಹದ ಬಗ್ಗೆ ಯಾವುದೇ ಗುರುತನ್ನು ಬಿಡುವ ಉದ್ದೇಶ ಇರಲಿಲ್ಲ. ಅದಕ್ಕೆ ನಾನು ಅವನನ್ನು ಜೋರಾಗಿ ಅಪ್ಪಿಕೊಂಡು ಕಣ್ಣೀರು ಸುರಿಸಿ ನೇರವಾಗಿ ನಾನು ಯಾವ ರೀತಿಯ ಸ್ನೇಹ ಸಂಬಂಧವನ್ನು ಅಪೇಕ್ಷಿಸುತ್ತಿದ್ದೇನೆ ಎನ್ನುವುದನ್ನು ಅರ್ಥವಾಗುವಂತೆ ಬಿಡಿಸಿ ಹೇಳಿದೆ ನನ್ನ ಮಾತುಗಳನ್ನು ಕೇಳಿ ಅವನಿಗೆ ನನ್ನ ಮೇಲೆ ಕರುಣೆ ಬಂತು, ಹೊರತಾಗಿ ಪ್ರೀತಿ ಬರಲೇ ಇಲ್ಲ ನನ್ನ ತಲೆಯನ್ನು ಸವರಿ ಆ ಸಂದರ್ಭಕ್ಕೆ ನನಗೆ ಅರ್ಥವಾಗದ ಭೋದನೆಯನ್ನು ನೀಡಿ ಹೊರಟುಹೋದ. ಅವನಿಂದ ನನ್ನ ಯಾವುದೇ ಒಂದು ಸಣ್ಣ ಬಯಕೆಯನ್ನು ಈಡೇರಿಸಿಕೊಳ್ಳಲು ಆಗಲಿಲ್ಲ.
ಮರುದಿನ ಬ್ಯಾಂಕ್ ನಲ್ಲಿ ಅವನಿಗೆ ಮುಖ ತೋರಿಸಲು ನಾಚಿಕೆಯಾಯಿತು ಅವನು ನನ್ನ ಕೈಗೆ ಸ್ಪರ್ಶ ಮಾಡುವುದಿರಲಿ ನನ್ನ ಮುಖದ ಕಡೆಯೂ ನೋಡಲಿಲ್ಲ. ಉಳಿದಿರೋ ಕೆಲವೇ ದಿನಗಳಲ್ಲಿ ಹೇಗಾದರೂ ಮಾಡಿ ಅವನನ್ನು ಗೆಲ್ಲಬೇಕೆಂದು ಪ್ರಯತ್ನಿಸಿದೆ ಆದರೆ ಅವನು ನನ್ನಲ್ಲಿ ಯಾವುದೇ ರೀತಿಯ ಆಸಕ್ತಿ ಮತ್ತು ಆಸೆಯನ್ನು ತೋರಿಸಿಕೊಡಲಿಲ್ಲ. ಇದೇ ರೀತಿ ದಿನ ಕಳೆದು ತಿಂಗಳ ಕೊನೆಯ ದಿನ ಬ್ಯಾಂಕಿನಲ್ಲಿ ಡೇವಿಡ್ ಗೆ ಬೀಳ್ಕೊಡುಗೆ ಮತ್ತು ಸನ್ಮಾನವನ್ನು ಆಯೋಜಿಸಲಾಗಿತ್ತು. ಒಬ್ಬರಾದ ಮೇಲೊಬ್ಬರಂತೆ ಎಲ್ಲರೂ ಅವನ ಕೈ ಕುಲುಕಿಸಿ ಅವನಿಗೆ ಶುಭ ಹಾರೈಸುತ್ತಿದ್ದರು. ನಾನು ಕೊನೆಯಲ್ಲಿ ಬಂದು ಅವನ ಕೈಯನ್ನು ಕುಲುಕಿ ಶುಭಾಶಯಗಳು ತಿಳಿಸುವುದರ ಜೊತೆಗೆ "ಇನ್ನೂ ಸಮಯವಿದೆ" ಎಂದು ಹೇಳಿ ಅವನ ಕೈಯನ್ನು ಜೋರಾಗಿ ಒತ್ತಿದೆ. ಅವನು ತನ್ನ ಕೈ ಬಿಡಿಸಿಕೊಂಡು ಹೊರಟುಹೋದ. ಅವನು ಆಡಳಿತ ಮಂಡಳಿ ಸದಸ್ಯನಾದ ಮೇಲೆ ನನ್ನ ಕೆಲಸವನ್ನು ಕಳೆದುಕೊಳ್ಳುತ್ತೇನೆ ಎನ್ನುವ ಭಯ ಕಾಡತೊಡಗಿತು. ಆದರೆ ಅವನು ಆ ರೀತಿಯ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಪ್ರೀತಿ, ಸ್ನೇಹ ಎಂದುಕೊಂಡು ಅನೈತಿಕ ಸಂಬಂಧದಲ್ಲಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದೆ ಎಂದು ತಡವಾಗಿ ಮನವರಿಕೆಯಾಯಿತು. ಡೇವಿಡ್ ನಮ್ಮ ಶಾಖೆಗೆ ಭೇಟಿ ನೀಡಿದಾಗಲೆಲ್ಲ ನನಗೆ ಅಸಹ್ಯ ಮತ್ತು ಪಾಪಪ್ರಜ್ಞೆ ಕಾಡತೊಡಗಿತು. ಅನಿವಾರ್ಯವಲ್ಲದ ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿದೆ. ಪತಿಯೇ ನನ್ನ ಸರ್ವಸ್ವವೆಂದು ಅವರೊಂದಿಗೆ ಅವರ ಕೆಲಸಕ್ಕೆ ಅನುಕೂಲವಾಗುವಂತೆ, ನನ್ನ ಮಗನೊಂದಿಗೆ ನಾನು ಪಕ್ಕದ ರಾಜ್ಯದಲ್ಲಿಯೇ ಮನೆಮಾಡಿ ನೆಲೆ ನಿಂತೆ.

No posts
No posts
No posts
No posts
Comments