ಮೈಸೂರ್ ಇಂದ ಕರ್ನಾಟಕ ಬ್ಯಾಂಗಳೂರ್ ಇಂದ ಬೆಂಗಳೂರು ಪುನೀತ್ ಗೆ ಶ್ರದ್ಧಾಂಜಲಿ's image
Poetry2 min read

ಮೈಸೂರ್ ಇಂದ ಕರ್ನಾಟಕ ಬ್ಯಾಂಗಳೂರ್ ಇಂದ ಬೆಂಗಳೂರು ಪುನೀತ್ ಗೆ ಶ್ರದ್ಧಾಂಜಲಿ

Gopinath SGopinath S February 4, 2022
Share0 Bookmarks 22 Reads0 Likes

ಇದು ಹೊಯ್ಸಳ, ವಿಜಯನಗರ, ವಡೆಯರ್ ಆಳಿದ ರಾಜ್ಯ

ಪುರಂದರ, ಕನಕದಾಸರ ಕೀರ್ತನೆಗಳು ನಮ್ಮ ಪುಣ್ಯ

ಯುಗಾದಿ ವಿಜಯದಶಮಿ ಸಂಭ್ರಮೆ ಕಮ್ಮಿ ಆಯಿತು

ಮೈಸೂರು ಇಂದ ಕರ್ನಾಟಕವಾಯಿತು.

 

ಕುವೆಂಪು, ಡಿವಿಜಿ, ರಾಜಕುಮಾರ್ ಅಂಥ ಪುಣ್ಯ ಜೀವಿಗಳು

ಜನಿಸಿದ ರಾಜ್ಯ ಹೀಗೆ ಆಗ ಬೇಕೆ?

ಗಂಗೂಬಾಯಿ, ಭೀಮಸೇನ್ ಜೋಶಿ, ಕಾರ್ನಾಡ್ ಅಂಥವರ ನಾಡು

ರೀತಿ ಹಿಂದುಳಿಯ ಬೇಕೇ?

 

ಇಪ್ಪತ್ತೈದು ವರ್ಷಗಳ ಹಿಂದೆ ಬ್ಯಾಂಗಳುರ್ ಗೆ ಬಂದೆ

ವಾತಾವರಣ ಅತೀ ಸುಂದರ ಎಂದೆ

ವಾಹನಗಳು ಬಹಳಷ್ಟು ಕಡಿಮೆ ಆಗಿತ್ತು

ಜನರ ಜೀವನ ಸುಖಮಯವಾಗಿತ್ತು.

 

ನಮ್ಮ ಮನೆಗೆ ಆಟೋ ಬರುತ್ತಿರಲಿಲ್ಲ

ರೈಲು ನಿಲ್ದಾಣ ದೂರ ಇತ್ತಲ್ಲ

ಟ್ಯಾಕ್ಸಿ ಬಹಳಷ್ಟು ಇರಲಿಲ್ಲ

ಒಂದಕ್ಕೆರಡು ಬೆಲೆ ಕೊಡಬೇಕಲ್ಲ.

 

ಆದರೆ ಜೀವನ ಸುಖವಾಗೇ ಇತ್ತು

ಮಕ್ಕಳು ಶಾಲೆಗೆ ಹೋಗಲು ಬಸ್ಸು ಬರುತಿತ್ತು

ನಾನು ದ್ವಿಚಕ್ರದಲ್ಲೇ ಸಂತುಷ್ಟನಾಗಿದ್ದೆ

ವಾರಕ್ಕೊಮ್ಮೆ ಕಾರ್ ತೆಗೆಯುತ್ತಿದ್ದೆ.

 

ಅಗಾಗ್ಯೆ ಚಿತ್ರ ಮಂದಿರದಲ್ಲಿ ಚಿತ್ರ ನೋಡುವೆವು

ಇಂಟರ್ವಲ್ನಲ್ಲಿ ಚಕ್ಕಲಿ ಕೋಡುಬಳೆ ತಿನ್ನುವೆವು

ಹೋಟೆಲ್ನಲ್ಲಿ ಊಟ ಮಾಡಿ ಬರುವೆವು

ರಾತ್ರಿ ಮನೆಗೆ ಬರಲು ಹೆದರಿಕೆ ಇಲ್ಲವಾದವು.

 

ಮಾಹಿತಿ ತಂತ್ರಜ್ಞಾನ ಬ್ಯಾಂಗಳೂರಿಗೆ ಬರಲು

ಹೊರ ರಾಜ್ಯದಿಂದ ಬಂದು ನೆನಸಿದರು ಜನರು

ಮೆಲ್ಲನೆ ಕನ್ನಡ ಸಂಸ್ಕೃತಿ ಮರೆಯಾಯಿತು

ನಮ್ಮನ್ನೇ ನಾವು ಮರತಂತಾಯಿತು.

 

ಬ್ಯಾಂಗಳೂರ್ ಇಂದ ಬೆಂಗಳೂರು ಆಯಿತು

ಜನರ ಭಾಷೆ ಹಿಂದಿ, ತಮಿಳು, ತೆಲುಗು ಅನಿಸಿತು

ಗಂಡ ಹೆಂಡತಿ ಕೆಲಸದಲ್ಲೇ ಮಗ್ನರಾದರು

ಮಕ್ಕಳು ವಿಡಿಯೋ ನೋಡಲು ನಿಪುಣರಾದರು.

 

ಈಗ ಎಲ್ಲಿ ನೊಡಿದರು ಆಟೋ, ಟ್ಯಾಕ್ಸಿ, ಕಾರು

ರಸ್ತೆಯಲ್ಲಿ ಬರೀ ಫ್ಲೈಓವರ್

ಸಿನೆಮಾ ನೋಡಲು ಮಾಲ್ ಗೆ ಹೋದರೆ

ಪಾಪ್ ಕಾರ್ನ್, ಕೋಕ್ ತೊಗೋಳಿ ಅಂತಾರೆ.

 

ಮಧ್ಯೆ ನಮ್ಮ ಪ್ರಿಯ ಪುನೀತ್ ತೀರಿದರು

ಹೃದಯ ಘಾತ ವೆಂದು ಡಾಕ್ಕ್ಟರ್ ಹೇಳಿದರು

ಚಿಕ್ಕ ವಯಸ್ಸಿನಲ್ಲೇ ಹೀಗೆ ಹೋದರೆ

ಏನು ಪಾಠ ಕೊಟ್ಟೆವು ನಮ್ಮ ಯುವಕರಿಗೆ.

 

ಹೀಗೆ ಕಳೆಯುವೆವು ಇಪ್ಪತ್ತೊಂದನೆಯ ಶತಮಾನ

ನಾವು ಮರೆತೆವು ನಮ್ಮ ಅಭಿಮಾನ

ಮಕ್ಕಳು ತಿಳಿಯ ಬೇಕು ಪರಿಸ್ಥಿತಿ

ಎಂದಿಗೂ ಬಿಡ ಬಾರದು ನಮ್ಮ ಸಂಸ್ಕೃತಿ.

No posts

Comments

No posts

No posts

No posts

No posts