ಲತ ಮಂಗೇಶ್ಕರ್ ಗೆ ಶ್ರದ್ಧಾಂಜಲಿ's image
Poetry2 min read

ಲತ ಮಂಗೇಶ್ಕರ್ ಗೆ ಶ್ರದ್ಧಾಂಜಲಿ

Gopinath SGopinath S February 27, 2022
Share0 Bookmarks 26 Reads0 Likes

ಈ ನನ್ನ ದೇಶದ ಜನರೇ

ನಿಮ್ಮ ಕಣ್ಣಲ್ಲಿ ಕಣ್ಣೀರು ತುಂಬುತಿದಿಯೇ?

ಇದು ಲತ ದೀದಿಯವರ ಕಥೆ

ಅವರ ಮಧುರ ವಾಣಿ ನಮ್ಮೆಲ್ಲರನ್ನು ಬಿಟ್ಟು ಹೋಯಿತೆ?


ಇಂದೋರ್ ನಲ್ಲಿ ಜನಿಸಿದ ಹೇಮ

ಬೆಳದು ಆದರು ಲತ

ತಂದೆ ತಾಯಿ ಅಜ್ಜ ಅಜ್ಜಿಯರು ಕೊಟ್ಟರು

ಸಂಗೀತ ಅಭಿನಯದ ರುಚಿ ಕಂಡರು.


ಅವರ ಪೂರ್ವಜರು ಗೋವಾದ ಮಂಗೇಶ್ ನ ನಿವಾಸಿ ಆಗಿದ್ದರು

ಹೀಗಾಗಿ ಅವರ ಉಪನಾಮ ಮಂಗೇಶ್ಕರ್ ಇಟ್ಟು ಕೊಂಡರು

ಐದು ಮಕ್ಕಳಲ್ಲಿ ಇವರೇ ದೊಡ್ಡವರಾಗಿದ್ದರು

ತಂದೆಯವರ ನಿಧನದ ಮೇಲೆ ಜವಾಬ್ದಾರಿ ಇವರಿಗೆ ಬಂತೆಂದರು.


ಇವರಿಗೆ ಆಗ ಬರೀ ಹದಿಮೂರು ವರುಷವಲ್ಲ

ಶಾಲೆಗೂ ಹೋಗಲು ಅವಕಾಶ ಸಿಗಲಿಲ್ಲ

ಅಭಿನಯದ ರುಚಿ ಕಮ್ಮಿ ಆಯಿತು

ಸಂಗೀತದ ರುಚಿ ಹೆಚ್ಚು ಆಯಿತು.


ಸಂಗೀತ ನಿಪುಣತೆ ಹೆಚ್ಚು ಆಗಲು ಮುಂಬಯಿ ಬಂದರು

ಮರಾಠಿ ಚಿತ್ರದಲ್ಲಿ ಹಾಡಲು ಪ್ರಾರಂಭಿಸಿದರು

ಹಿಂದಿ ಚಿತ್ರದಲ್ಲಿ ಸಿಕ್ಕಿದ್ದು ಭಜನ್ ಎಂದರು.

ಆಗಿನಿಂದ ಈವರೆಗೂ 'ರಾಣಿ' ಯಾಗೆ ಉಳಿದರು.


ಅವರ ಒಂದೊಂದು ಹಾಡು ಮನ ಮೆಚ್ಚುವಂತಿತ್ತು

ಅವರ ಧ್ವನಿ ಮಾತೇ ಸರಸ್ವತಿಯ ವರವಾಗಿತ್ತು

ಅರವತ್ತಿರಿಂದ ಎರಡು ಸಾವಿರವರೆಗೂ ಮೊಟ್ಟ ಮೊದಲಾಗಿದ್ದರು

ಮೂವತ್ತಾರಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡು ಹಾಡಿದ್ದರು.


ನಾವು ಮರೆಯಲಾದೆವು 'प्यार किया तो डरना क्या',

'अल्लाह तेरो नाम' ಅಂತಹ ಗೀತೆಗಳು

'ये मेरे वतन की लोगों', 'कही दीप जले'

'आज फिर जीने की तमन्ना है' ಅಂತಹ ಹಾಡುಗಳು.


'इन्ही लोगों ने', 'सत्यम शिवम सुंदरम'

'तेरे बिना ज़िन्दगी से कोई' ಇಂದಿಗೂ ಅಮರ

'सुन साहिबा सुन' ಮತ್ತು 'जिया जले'

'कुछ ना कहो' ಹಾಡುಗಳು ಮನ ರಂಜಿಸಿದೆ.


ಲತ ದೀದಿ ಪುಣೆಯಲ್ಲಿ ಆಸ್ಪತ್ರೆ ಕಟ್ಟು ಕೊಟ್ಟರು

ಬಹಳಷ್ಟು ಭಜನ್ ಆಲ್ಬಮ್ ಹೊರ ತಂದರು

ತೊಂಬತ್ತೆರಡು ವರ್ಷಗಳಲ್ಲಿ ಎಷ್ಟು ಜನರ ಪ್ರೇರಣೆ ಆದರು

ನಿಜಕ್ಕೂ ಇವರು ಭಾರತದ ಅಮೂಲ್ಯ ರತ್ನವಾದರು.

No posts

Comments

No posts

No posts

No posts

No posts