ಕರೊನ ಬಂದಿದ್ದೂ ಬಂತು's image
Poetry1 min read

ಕರೊನ ಬಂದಿದ್ದೂ ಬಂತು

Gopinath SGopinath S February 5, 2022
Share0 Bookmarks 29 Reads0 Likes

ಕರೊನ ಬಂದಿದ್ದೂ ಬಂತು

ನಮ್ಮ ಜೀವನ ಬದಲಾಯಿತು

ಸರ್ಕಾರ ಲಾಕ್ಡೌನ್ ಮಾಡಿದರು

ನಮ್ಮನ್ನೆಲ್ಲ ಮನೆಯಲ್ಲೇ ಕೂರಿಸಿದರು

ಈಗ ಹೆಚ್ಚು ಸೋಂಕು ಆಗಿರಿವುದು

ಜನರಿಗೆ ಹೆದರಿಕೆ ಬಂದಿರುವುದು

ಮನೆಯಲ್ಲೇ ಆಫೀಸ್ ಕೆಲಸ

ಮಕ್ಕಳಿಗೆ ಆನ್ಲೈನ್ ಓದು ಬರಹ

ಹೋಟೆಲ್ ಇಲ್ಲ ಸಿನೆಮಾ ಇಲ್ಲ

ಟಿವಿ ಮುಂದೇನೆ ಕುಳಿತಿರಬೇಕಲ್ಲ

ಏನು ಮಾಡುವುದು ಬೇರೆ ದಾರಿ ಇಲ್ಲ

ಬಾಳು ಬಂಗಾರದಿಂದ ಕಬ್ಬಿಣ ಆಯಿತಲ್ಲ

ಇದು ಒಂದು ಪಾಠ ಎನ್ನುವೆನು

ಕಲಿತೆವು ಜೀವನದ ಅರಿವನ್ನು

ಸಮಯ ತಾಳ್ಮೆ ತೋರಿಸಿದರೆ

ನಮಗೆ ಒಳ್ಳೆಯದು ಅನ್ನುತ್ತಾರೆ

ಕೈ ತೊಳೆಯಿರಿ ದೂರ ನಿಲ್ಲಿರಿ

ನೀರು ಕುಡಿಯಿರಿ ಊಟ ಮಾಡಿರಿ

ಬೇಸರ ಪಡಬೇಡಿ ಬಾಳು ಒಂದೇ ತರಹ ಅಲ್ಲ

ಈಗಿರುವ ಕರೊನ ನಾಳೆ ಇರುವಿದಿಲ್ಲ


No posts

Comments

No posts

No posts

No posts

No posts