ಕಾಂತಾರ ಒಂದು ದಂತ ಕಥೆ's image
Poetry2 min read

ಕಾಂತಾರ ಒಂದು ದಂತ ಕಥೆ

Gopinath SGopinath S November 17, 2022
Share0 Bookmarks 24 Reads0 Likes

'ಕಾಂತಾರ ಒಂದು ದಂತ ಕಥೆ'

ಎಂಬ ಈ ಕನ್ನಡ ಚಿತ್ರ ತೆರೆಗೆ ಬಂದಿದೆ

ಎಲ್ಲರ ಮೆಚ್ಚುಗೆಯನ್ನೂ ಪಡೆದಿದೆ

ಇತರ ಭಾಷೆಯಲ್ಲೂ ಅನುವಾದಿಸಲಾಗಿದೆ.


ಒಬ್ಬ ರಾಜನಿಗೆ ಎಲ್ಲಾ ಸುಖಗಳಿದ್ದವು

ಆದರೆ ಮನಶ್ಯಾಂತಿ ಇಲ್ಲವಾದವು

ಅದನ್ನೇ ಹುಡುಕುತ್ತಾ ಕಾಡು ಸೇರಿದನು

ಅಲ್ಲಿ ಪಂಜುರ್ಲಿ ದೈವದ ಮೂರ್ತಿ ಕಂಡನು.


ಕುಲಜನರು ಆ ದೈವ ತಮ್ಮ ರಕ್ಷಕ ಎಂದರು

ಅರಣ್ಯ ಭೂಮಿ ಕೊಡುವುದಾಗಿ ರಾಜರು ಭಾಷೆ ಕೊಟ್ಟರು

ದೈವ ಮೂರ್ತಿಯನ್ನು ಮನೆಗೆ ತಂದರು

ರಾಜರ ಕುಟುಂಬಕ್ಕೆ ಶಾಂತಿ ಸಿಕ್ಕಿತು ಎಂದರು.


ಆ ಹಳ್ಳಿಯ ಶಿವ ಎಲ್ಲರ ಮೆಚ್ಚುಗೆ ಉಳ್ಳವನು

ಕಂಬಳ ಓಟದಲ್ಲಿ ಗೆದ್ದರೂ ಮೋಸ ಹೋದವನು

ಲೀಲಾ ಮೊಟ್ಟಮೊದಲ ಹೆಣ್ಣು ಸಿಬ್ಬಂದಿ ಆದಳು

ಅವಳು ಶಿವನನ್ನು ಪ್ರೀತಿಸಿದಳು.


ರಾಜರ ವಂಶ ಬಹಳ ವರ್ಷ ಸುಖ ಕಂಡರು

ವಂಶ ಪರಂಪರೆ ರಾಜರ ಭಾಷೆ ತಪ್ಪಿದರು

ಕಾನೂನು ಪ್ರಕರಣೆ ಮಾಡಿದರು

ಆಶ್ಚರ್ಯದಿಂದ ರಾಜರು ಸಾವನ್ನು ಕಂಡರು.


ಶಿವನ ತಂದೆ ದೈವ ನರ್ತಕ ಗುಳಿಗರಾಗಿದ್ದರು

ರಾಜ ಭೂತ ಕೋಲ ಗುಳಿಗನಿಗೆ ಬೇಡಿ ಕೊಂಡರು

ಭೂಮಿ ರಾಜನಿಗೇ ಸೇರಲೆಂದು ಹೇಳಿದರು

ಒಪ್ಪಿಕೊಳ್ಳದೆ ಗುಳಿಗ ಮರೆಯಾದರು

ಶಿವನಿಗೆ ತಂದೆ ಕಾಣದೆ ದುಃಖ ಎಂದರು.


ಅರಣ್ಯ ಅಧಿಕಾರಿ ಮುರಳಿ ಆಕ್ಷೇಪಣೆ ತಂದರು

ಅರಣ್ಯದಲ್ಲಿ ಬೇಲಿ ಹಾಕಲು ಪ್ರಯತ್ನಿಸಿದರು

ಶಿವ ಹಳ್ಳಿ ಜನರೊಂದಿಗೆ ಸೇರಿದನು

ಮುರಳಿಯೊಂದಿಗೆ ದ್ವೇಷ ತಂದು ಕೊಂಡನು.


ಮುಂದೆ ಎನಾಗುವದೆಂದು ತೆರೆಯ ಮೇಲೆ ಕಂಡಿರಿ

ಕಂಬಳ ಓಟ, ಕೋಲ ನೃತ್ಯ, ಕೊನೆಯ ದೃಶ್ಯ ನೋಡಿ ಆನಂದಿಸಿರಿ

ಸಿಂಗಾರ ಸಿರಿಯೆ, ವರಾಹ ರೂಪಂ ಸಂಗೀತ ಅದ್ಭುತ

ಸಂಭಾಷಣೆ, ಚಿತ್ರೀಕರಣ, ನಟನೆಯೂ ವಿಸ್ಮಯ

ಕಾಂತಾರ ತಪ್ಪದೇ ನೋಡಬೇಕಾದ ಕನ್ನಡ ಚಿತ್ರ.


No posts

Comments

No posts

No posts

No posts

No posts