ಇಂಡಿಯಾದ ಅಮ್ರಿತ್ ಮಹೋತ್ಸವ 2022's image
Poetry2 min read

ಇಂಡಿಯಾದ ಅಮ್ರಿತ್ ಮಹೋತ್ಸವ 2022

Gopinath SGopinath S February 4, 2022
Share0 Bookmarks 24 Reads0 Likes

ಇಂಡಿಯಾ ಒಂದು ಅಪೂರ್ವ ದೇಶ

ನೂರ ನಲವತ್ತು ಕೋಟಿ ಜನರ ಒಟ್ಟು ಕುಟುಂಬ

ಅಂಡಮಾನ್ ಇಂದ ಲಡಾಖ್ ಕಚ್ ಇಂದ ಅರುಣಾಚಲ

ನಾವು ಬೇರೆ ಬೇರೆ ಬಣ್ಣವಾಗಿರ ಬಹುದು

ನಾವು ಬೇರೆ ಬೇರೆ ಭಾಷೆ ಮಾಥನಾಡ ಬಹುದು

ನಾವೆಲ್ಲರೂ ಮೊದಲಿಗೆ ಇಂಡಿಯನ್ನರು

ನಂತರ ನಮ್ಮ ನಮ್ಮ ರಾಜ್ಯದವರು.

 

ದಕ್ಷಿಣದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆ ಆದರೆ

ಉತ್ತರದಲ್ಲಿ ಹಿಂದಿ, ಉರ್ದು, ಪಂಜಾಬಿ, ಬೆಂಗಾಲಿ ಮತ್ತು ಇತರ ಭಾಷೆ ಇರುವುದು.

ಪೂರ್ವದಲ್ಲಿ ಮರಾಠಿ, ಗುಜರಾತಿ ಭಾಷೆ ಆದರೆ

ಪಶ್ಚಿಮದಲ್ಲಿ ಮೈಥಿಲಿ, ಭೋಜಪುರಿ, ಒರಿಯ, ಅಸ್ಸಾಮಿ ಮತ್ತು ಇತರ ಭಾಷೆ ಇರುವುದು.

 

ನಾವು ಸಂಕ್ರಾಂತಿ, ಪೊಂಗಲ್, ಯುಗಾದಿ, ಓಣಂ ಆಚರಿಸಿದರೆ

ಮತ್ತವರು ಲೋರಿ, ಹೋಲಿ, ತೀಜ್, ಬೈಸಾಖಿ ಆಚರಿಸುತ್ತಾರೆ

ದೇಶದಾದ್ಯಂತ ನವರಾತ್ರಿ, ಶ್ರೀರಾಮ ನವಮಿ, ದೀಪಾವಳಿ ಆಚರಿಸುವೆವು

ಈದ್ ಮತ್ತು ಕ್ರೈಸ್ತ ಜಯಂತಿ ಕೂಡ ಕೊಂಡಾಡುವೆವು.

 

ವಿಜಯದಶಮಿಯಂದು ರಾವಣನ ದಹನ ಶ್ರೀರಾಮರ ಕೈಲಾದರೆ

ಪಶ್ಚಿಮದಲ್ಲಿ ನವಮಿಯಂದು ಮಹಿಷಾಸುರ ದಹನ ದುರ್ಗಾ ಮಾತೆಯ ಕೈಯಲ್ಲಿ

ದಕ್ಷಿಣದಲ್ಲಿ ಗಣೇಶ, ಶ್ರೀರಾಮ, ಕೃಷ್ಣರ ಜಯಂತಿ ಆಚರಿಸಿದರೆ

ಉತ್ತರದಲ್ಲಿ ಶಿವ, ಶ್ರೀರಾಮ, ಕಾಳಿ, ಲಕ್ಷ್ಮಿ ಪೂಜೆ ಮಾಡುವರು.

 

ಮಳೆಗಾಲ ದಕ್ಷಿಣದ ಕೇರಳ ಇಂದ ಶುರುವಾಗಿ

ಪೂರ್ವ, ಉತ್ತರ, ಪಶ್ಚಿಮಕ್ಕೆ ತೆರಳುತ್ತದೆ

ದಕ್ಷಿಣದಲ್ಲಿ ಬೇಸಿಗೆ ಕಾಲ ಬಂದರೆ

ಉತ್ತರದಲ್ಲಿ ಛಳಿ ಹೋಗಿ ಬೇಸಿಗೆ ಬರುತ್ತದೆ.

 

ನಮ್ಮ ದಿನಚರ್ಯದಲ್ಲಿ ಎಷ್ಟೇ ವ್ಯತ್ಯಾಸವಿದ್ದರೂ

ನಾವೆಲ್ಲರೂ ಇಂಡಿಯಾ ದೇಶದ ನಾಗರಿಕರು

ಇಂಡಿಯಾ ದೇಶ ಈಗ ಅಮೃತ ಮಹೋತ್ಸವ ಆಚರಿಸಿದರೂ

ನಮ್ಮ ಭರಥ ಖಂಡ ಸಾವಿರಾರು ವರ್ಷಗಳಿಂದಿಹುದು.

 

ಜೈ ಇಂಡಿಯ ಮಾತೆ ಜೈ ಭಾರತ ಮಾತೆ.

 

No posts

Comments

No posts

No posts

No posts

No posts