ಹೆಂಡತಿ's image
Share0 Bookmarks 49 Reads0 Likes

ನಿನ್ನ ಎಳೆ ವಯಸ್ಸಿನಲ್ಲಿ ನನ್ನ ಜೀವನದಲ್ಲಿ ಬಂದೆ

ಈ ಹೊಸ ವಾತಾವರಣದಲ್ಲಿ ಜೊತೆಯನ್ನು ಕಂಡೆ

ನಿನ್ನ ಹುಟ್ಟು ಮನೆಯನ್ನು ಬಿಟ್ಟು ಬಂದೆ

ಇಲ್ಲೇ ಕೊರತೆ ಇಲ್ಲದೇ ನೆಲೆಸಿದೆ.


ನಿನ್ನ ನೋವು ಹೊರೆಗೆ ಸಮಾನ ಇಲ್ಲದೆ

ನಮ್ಮ ಮಕ್ಕಳನ್ನು ಬೆಳೆಸಿದೆ

ನಾ ಹೇಳುವೆ ನೀನೇ ಧಕ್ಕೆ ತಾಳುವೆ

ಆಶ್ಚರ್ಯವಲ್ಲ 'ಅಮ್ಮ' ಳಾಗಿ ದಾರಿ ತೋರಿಸುವೆ.


ಮನೆ ಕೆಲಸ, ಅಡುಗೆ, ಏನೇ ಕಾರ್ಯವಾಗಲೀ

ನೀನು ಯಾವಾಗಲೂ ನಿರತ ವಾಗಿರುವೆ

ನಾನು ಕಚೇರಿಗೆ ಹೋಗಿ ಸಂಪಾದಿಸಿದರೂ

ನಿನ್ನಷ್ಟು ಗೌರವ ನಾನು ಗಳಿಸಲಿಲ್ಲ ಎನುವೆ.


ಈಗಲೂ ಮಕ್ಕಳು ನಿನ್ನನ್ನು ಹೊಂಬಲಿಸುವರು

ಅವರು ಪ್ರೀತಿ ವಾತ್ಸಲ್ಯ ತೋರಿಸುವರು

ಅವರಿಗೆ ನನ್ನ ಪ್ರೀತಿ ಇಲ್ಲವೆಂತಿಲ್ಲ

ಅದೂ ನಿಜವೆಂದು ಹೇಳುತಿಹನಲ್ಲ.


ಹೆಂಡತಿ ಎಂದರೆ ಎಲ್ಲರೂ ನಗೆ ಮಾಡುವರು

ಮದುವೆ ಒಂದು ಕಲಹ ವೆನ್ನುವರು

ಮನೆಯಲ್ಲಿ ಹೆಂಡತಿ ಇದ್ದಾಳೆ ಎಂಬುದೇ ತಮಾಷೆಯಾಗಿದೆ

ಆದರೆ ಅದು ಒಂದು ದೊಡ್ಡ ನಿಜದ ಅಂಗವಾಗಿದೆ.


ನಾವೆಲ್ಲರೂ ನಿನ್ನ ಅಡಿಗೆಯ ಪ್ರತೀಕ್ಷೆ ಮಾಡುವೆವು

ನಿನ್ನ ಉಣವುಗಳನ್ನು ಸಂತೋಷದಿಂದ ರುಚಿಸುವೆವು

ದೇವರು ಕೊಡಲಿ ನಿನಗೆ ಆರೋಗ್ಯ ಎಂಬುವೆನು

ಈ ವಯಸ್ಸಿನಲ್ಲಿ ಅದೇ ಸಂಪತ್ತು ಎಂದೆನುವೆನು.


No posts

Comments

No posts

No posts

No posts

No posts